ಈ ಟ್ರಸ್ಟ್ ನ ಕಾರ್ಯ ಕ್ಷೇತ್ರವು ವಿಶಾಲವಾಗಿದ್ದು, ಇದರ ಕಾರ್ಯಾಲಯದ ನಂಬರ್ 6, 3ನೇ ಮುಖ್ಯ ರಸ್ತೆ, 8ನೇ ಅಡ್ಡರಸ್ತೆ, ಕೆನರಾ ಬ್ಯಾಂಕ್ ಕಾಲೋನಿ, ಚಂದ್ರ ಲೇಔಟ್, ವಿಜಯನಗರ, ಬೆಂಗಳೂರು - 560 040.
ಟ್ರಸ್ಟ್ ನ ವತಿಯಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಹೊರಾಂಗಣ ಮತ್ತು ಹೊರಾಂಗಣ ಪ್ರದೇಶಗಳಲ್ಲಿ ಆಸಕ್ತಿಯ ವಿದ್ಯಾರ್ಥಿಗಳನ್ನು ತರಬೇತಿ ನೀಡುವುದು ಮತ್ತು ವಿದ್ಯಾರ್ಥಿಗಳ ಹಳೆಯ ಕಾಲದ ಕ್ರೀಡೆಗಳನ್ನು ಜೀವನ ನಡೆಸುವುದು ಮತ್ತು ಹಳೆಯಕಾಲದ ನಾಟಕಗಳು ಮತ್ತು ಸಂಸ್ಕೃತಿಯನ್ನು ಕಿರುತೆರೆಯ ಮೂಲಕ ಸೆರೆಹಿಡಿದು ಪ್ರದರ್ಶಿಸುವುದು. ಟ್ರಸ್ಟ್ ನ ವತಿಯಿಂದ ವ್ಯಕ್ತಿತ್ವ ವಿಕಾಸದ ಬಗ್ಗೆ (Personality Development ) ತರಗತಿಗಳನ್ನು ನಡೆಸುವುದು ಹಾಗೂ ಕೌಶಲ್ಯದ ಬಗ್ಗೆ (Skill Development) ತರಬೇತಿ ನೀಡುವುದು. ಹಾಗೂ ಆಡಿಯೋ ಹಾಗೂ ವಿಡಿಯೋ ಸಿಡಿಗಳನ್ನು ಬಿಡುಗಡೆ ಮಾಡುವುದು.
ಸರ್ಕಾರದಲ್ಲಿರುವ ವಿಶೇಷ ಸವಲತ್ತುಗಳನ್ನು ಪರಿಚಯಿಸಿ ಸ್ವಾವಲಂಬಿಗಳಾಗುವಂತೆ ಕಾರ್ಯಕ್ರಮಗಳನ್ನು ನಡೆಸುವುದು. ನಿರುದ್ಯೋಗಿ ವಿದ್ಯಾವಂತರಿಗೆ ಸ್ವಯಂ ಉದ್ಯೋಗ ತರಬೇತಿ ಉತ್ತೇಜನ ನೀಡುವುದು ಹಾಗೂ ತರಬೇತಿ ಕೇಂದ್ರಗಳನ್ನು ತೆರೆಯುವುದು. ಟ್ರಸ್ಟ್ ನ ವತಿಯಿಂದ ಘನತಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಪ್ರಯೋಜನಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಕಾರ್ಯಗಾರಗಳನ್ನು ನಡೆಸುವುದು.
ಟ್ರಸ್ಟಿ ಮಂಡಳಿಯು ಸಾಮಾನ್ಯವಾಗಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಟ್ರಸ್ಟಿನ ವಹಿವಾಟುಗಳ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ಅಗತ್ಯವಿದ್ದಲ್ಲಿ ಟ್ರಸ್ಟಿಗಳ ವೈಯಕ್ತಿಕ ಅಂಗೀಕಾರವನ್ನು ಪಡೆದು ನಿರ್ಣಯಗಳನ್ನು ತೆಗೆದುಕೊಳ್ಳುವ ಅವಕಾಶವಿರತಕ್ಕದ್ದು. ತೆಗೆದುಕೊಂಡಂತಹ ತೀರ್ಮಾನಗಳನ್ನು ನಡವಳಿಕೆ ಪುಸ್ತಕದಲ್ಲಿ ನಮೂದಿಸುವುದು, ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಬೇಕಾದರೆ ಟ್ರಸ್ಟಿನ ಬಹುಮತದ ಅಂತಿಮವಾಗಿರುತ್ತದೆ. ಒಂದು ವೇಳೆ ಸಮ್ಮತ ಅಥವಾ ಅಸಮ್ಮತವನ್ನು ಒಟ್ಟಾಗಿ ಸೂಚಿಸಿದರೆ ಆಗ ಸಭೆಯ ಅಧ್ಯಕ್ಷರು ಎರಡನೇ ಬಹುಮತವನ್ನು ಹಾಕಬಹುದಾ ಗಿರುತ್ತದೆ ಹಾಗೂ ಪ್ರತಿವರ್ಷವೂ ತಪ್ಪದೆ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ನಡೆಸುವುದು.
ಹೆಚ್ಚಿನ ಮಾಹಿತಿ