ಸಂಸ್ಥಾಪಕ ಟ್ರಸ್ಟಿಗಳ ಉದ್ದೇಶಗಳು ಮತ್ತು ಕರ್ತವ್ಯಗಳು :

  • ಬಡ ಮಕ್ಕಳ ಕಲ್ಯಾಣ ಅಭಿವೃದ್ಧಿಗಾಗಿ ಶಾಲಾ ಕಾಲೇಜು ಸ್ಥಾಪನೆ, ವೃತ್ತಿ ಶಿಕ್ಷಣ ತರಬೇತಿ, ಸಂಸ್ಥೆಯ ವತಿಯಿಂದ ಕ್ರೀಡೆ ಸಾಂಸ್ಕೃತಿಕ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
  • ಟ್ರಸ್ಟ್ ನ ವತಿಯಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಒಳಾಂಗಣ ಮತ್ತು ಹೊರಾಂಗಣ ಪ್ರದೇಶಗಳಲ್ಲಿ ಆಸಕ್ತಿಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ತರಬೇತಿ ನೀಡುವುದು ಮತ್ತು ವಿದ್ಯಾರ್ಥಿಗಳ ಹಳೆಯಕಾಲದ ಕ್ರೀಡೆಯನ್ನು ಪುನರ್ಜೀವನ ನಡೆಸುವುದು ಮತ್ತು ಹಳೆಯ ಕಾಲದ ನಾಟಕಗಳನ್ನು ಮತ್ತು ಸಂಸ್ಕೃತಿಯನ್ನು ಕಿರುತೆರೆಯ ಮೂಲಕ ಸೆರೆಹಿಡಿದು ಪ್ರದರ್ಶಿಸುವುದು.
  • ಆಪತ್ಬಾಂಧವ ಚಾರಿಟಬಲ್ ಟ್ರಸ್ಟ್ ವತಿಯಿಂದ ವ್ಯಕ್ತಿತ್ವ ವಿಕಾಸದ ಬಗ್ಗೆ ತರಗತಿಗಳನ್ನು ನಡೆಸುವುದು ಹಾಗೂ ಕೌಶಲ್ಯದ ಬಗ್ಗೆ ತರಬೇತಿ ನೀಡುವುದು.
  • ನಿರುದ್ಯೋಗಿ ವಿದ್ಯಾವಂತರಿಗೆ ಸ್ವಯಂ ಉದ್ಯೋಗ ತರಬೇತಿ ಉತ್ತೇಜನ ನೀಡುವುದು ಹಾಗೂ ತರಬೇತಿ ಕೇಂದ್ರಗಳನ್ನು ತೆರೆಯುವುದು.
  • ಆಪತ್ಬಾಂಧವ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಪ್ರಯೋಜನಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಕಾರ್ಯಕ್ರಮಗಳನ್ನು ನಡೆಸುವುದು. ಟ್ರಸ್ಟ್ ನ ವತಿಯಿಂದ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ವೈವಿಧ್ಯತೆಯ ಬಗ್ಗೆ ಸಂರಕ್ಷಣೆ ಮತ್ತು ಅರಿವು ಮೂಡಿಸುವುದು.