ಟ್ರಸ್ಟ್ ನ ವತಿಯಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಹೊರಾಂಗಣ ಮತ್ತು ಹೊರಾಂಗಣ ಪ್ರದೇಶಗಳಲ್ಲಿ ಆಸಕ್ತಿಯ ವಿದ್ಯಾರ್ಥಿಗಳನ್ನು ತರಬೇತಿ ನೀಡುವುದು ಮತ್ತು ವಿದ್ಯಾರ್ಥಿಗಳ ಹಳೆಯ ಕಾಲದ ಕ್ರೀಡೆಗಳನ್ನು ಜೀವನ ನಡೆಸುವುದು ಮತ್ತು ಹಳೆಯಕಾಲದ ನಾಟಕಗಳು ಮತ್ತು ಸಂಸ್ಕೃತಿಯನ್ನು ಕಿರುತೆರೆಯ ಮೂಲಕ ಸೆರೆಹಿಡಿದು ಪ್ರದರ್ಶಿಸುವುದು. ಟ್ರಸ್ಟ್ ನ ವತಿಯಿಂದ ವ್ಯಕ್ತಿತ್ವ ವಿಕಾಸದ ಬಗ್ಗೆ (Personality Development ) ತರಗತಿಗಳನ್ನು ನಡೆಸುವುದು ಹಾಗೂ ಕೌಶಲ್ಯದ ಬಗ್ಗೆ (Skill Development) ತರಬೇತಿ ನೀಡುವುದು. ಹಾಗೂ ಆಡಿಯೋ ಹಾಗೂ ವಿಡಿಯೋ ಸಿಡಿಗಳನ್ನು ಬಿಡುಗಡೆ ಮಾಡುವುದು.
ಸರ್ಕಾರದಲ್ಲಿರುವ ವಿಶೇಷ ಸವಲತ್ತುಗಳನ್ನು ಪರಿಚಯಿಸಿ ಸ್ವಾವಲಂಬಿಗಳಾಗುವಂತೆ ಕಾರ್ಯಕ್ರಮಗಳನ್ನು ನಡೆಸುವುದು. ನಿರುದ್ಯೋಗಿ ವಿದ್ಯಾವಂತರಿಗೆ ಸ್ವಯಂ ಉದ್ಯೋಗ ತರಬೇತಿ ಉತ್ತೇಜನ ನೀಡುವುದು ಹಾಗೂ ತರಬೇತಿ ಕೇಂದ್ರಗಳನ್ನು ತೆರೆಯುವುದು. ಟ್ರಸ್ಟ್ ನ ವತಿಯಿಂದ ಘನತಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಪ್ರಯೋಜನಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಕಾರ್ಯಗಾರಗಳನ್ನು ನಡೆಸುವುದು.